ಮ್ಯಾಸೆಡೋನಿಯ ಗಣರಾಜ್ಯವು ಆಗ್ನೇಯ ಯುರೋಪ್‌ನಲ್ಲಿನ ಬಾಲ್ಕನ್ ಜಂಬೂದ್ವೀಪದ ಒಂದು ರಾಷ್ಟ್ರ. ಇದು ಸುತ್ತಲೂ ಇತರ ರಾಷ್ಟ್ರಗಳಿಂದ ಆವರಿಸಲ್ಪಟ್ಟಿದೆ. ಮ್ಯಾಸೆಡೋನಿಯದ ಉತ್ತರದಲ್ಲಿ ಸೆರ್ಬಿಯ, ಪಶ್ಚಿಮದಲ್ಲಿ ಅಲ್ಬೇನಿಯ, ದಕ್ಷಿಣದಲ್ಲಿ ಗ್ರೀಸ್ ಮತ್ತು ಪೂರ್ವಕ್ಕೆ ಬಲ್ಗೇರಿಯ ದೇಶಗಳಿವೆ. ಹಿಂದೆ ಯುಗೋಸ್ಲಾವಿಯದ ಭಾಗವಾಗಿದ್ದ ಮ್ಯಾಸೆಡೋನಿಯ ೧೯೯೧ರಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡಿತು.